ನಮ್ಮದು ನಿಸ್ವಾರ್ಥ ಸೇವೆ...ನಮ್ಮ ಭಾರತ ದೇಶದ ಪುರಾತನ ಪದ್ಧತಿಯಾದ ಆಯುರ್ವೇದವನ್ನು ಎಲ್ಲರಿಗೂ ತಿಳಿಯಲಿ ಹಾಗೂ ಅದರ ಉಪಯೋಗ ಪಡೆಯಲೇಂದು ನಾವು ಸಮಾಜಕ್ಕೆ ಮಾಡುವ ಸಣ್ಣ ಅಳಿಲು ಸೇವೆ

Follow Us

Coconut good for health

ತೆಂಗಿನಕಾಯಿ ( Coconut ) ಅತ್ಯಂತ ಪುಷ್ಟಿದಾಯಕ ಆಹಾರ. ಇದು ಶ್ರಮ ಜೀವಿಗಳಿಗೆ ಬಲವರ್ಧಕ ತ್ರಾಣಿಕ. ಶಾರೀರಿಕ ದೋಷಗಳ ನಿವಾರಣೆಗೆ ಒಣಕೊಬರಿಗಿಂತ ಹಸಿ ಕೊಬರಿ ಹೆಚ್ಚು ಪರಿಣಾಮಕಾರಿ.


Eating coconut benefits for skin

ಅಮೃತ ಪ್ರಾಯವಾದ ಎಳನೀರನ್ನು ಕುಡಿಯುವುದರಿಂದ ದಾಹ ಪರಿಹಾರವಾಗುವುದು, ಬಳಲಿಕೆ ನಿವಾರಣೆಯಾಗುವುದು ಆಲಸ್ಯ ಕಳೆದು ಲವಲವಿಕೆ ಉಂಟಾಗುವುದು. ಉರಿಮೂತ್ರ ಮತ್ತು ಕಟ್ಟು ಮೂತ್ರ ರೋಗಿಗಳಲ್ಲಿ ಎಳನೀರು ಸೇರಿಸುವುದರಿಂದ ಶೀಘ್ರ ಗುಣ ಕಂಡುಬರುವುದು. ಆದರೆ ಅಜೀರ್ಣ, ಕೆಮ್ಮು, ಉಬ್ಬಸ ಈ ರೋಗಗಳಲ್ಲಿ ಎಳನೀರು ಸೇವಿಸುವುದರಿಂದ ಹಾನಿಯುಂಟು.

ಗರ್ಭಿಣಿ ಸ್ತ್ರೀಯರಲ್ಲಿ ಮೂತ್ರವಿಸರ್ಜನೆ ಕಾಲದಲ್ಲಿ ತುಂಬಾ ಉರಿ ಆಗುತ್ತಿದ್ದರೆ ಎಳನೀರು ಮತ್ತು ಬಾರ್ಲಿ ನೀರನ್ನು ಯಥೇಚ್ಛವಾಗಿ ಸೇವಿಸುವುದರಿಂದ ಗುಣ ಕಂಡುಬರುವುದು.

ಎಳನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡಾವರ್ತಿ ಸೇವಿಸುವುದರಿಂದ ಉರಿಮೂತ್ರ ರೋಗ ನಿವಾರಣೆಯಾಗುವುದು.

ಪ್ರತಿದಿನ ಎಳನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಮಾಯುತ್ತವೆ ಕಪ್ಪು ಕಲೆಗಳು ನಶಿಸಿಹೋಗುತ್ತವೆ; ಮುಖದ ಚರ್ಮ ಮೃದುವಾಗಿ ಕಾಂತಿಯುತವಾಗುತ್ತದೆ.( ಆದರೆ, ಎಳನೀರಿನ ಬೆಲೆ ತುಂಬಾ ಹೆಚ್ಚಿರುವ ಕಾರಣ ಈ ಸಲಹೆಯನ್ನು ಜನ ಮಾನ್ಯ ಮಾಡುವ ಸಂಭವ ಕಡಿಮೆ.)

How much raw coconut should I eat a day?

ಅಂಗಾಲು ಅಂಗೈ ಉರಿಯುತ್ತಿದ್ದರೆ ಎಳನೀರು ಮತ್ತು ಸುಣ್ಣದ ತಿಳಿಯನ್ನು ಸಮಪ್ರಮಾಣದಲ್ಲಿ ಮಿಶ್ರಮಾಡಿ, ಒಂದು ಚಿಟಿಕೆ ಅರಿಶಿನದ ಪುಡಿ ಸೇರಿಸಿ ಅಂಗಾಲು ಅಂಗೈ ಗಳಿಗೆ ಹಚ್ಚಿದರೆ ಗುಣ ಕಂಡುಬರುವುದು.

ಎಳೆನೀರು ತಂಪಾದ ಪಾನೀಯ. ಹೃದಯ ,ಪಿತ್ತಕೋಶ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ರೋಗಗಳಿಂದ ನರಳುವವರಿಗೆ ಎಳನೀರು ನೀರು ಕೊಡುವುದರಿಂದ ಗುಣವುಂಟು. ಎಳನೀರು ಕುಡಿದರೆ ಮೂತ್ರ ವಿಸರ್ಜನೆ ಚೆನ್ನಾಗಿ ಆಗುವುದು. ಅತಿಸಾರ, ವಾಂತಿಯಾಗುವಿಕೆ ಈ ಸಂದರ್ಭಗಳಲ್ಲಿ ದೇಹದಲ್ಲಿ ಜಲಾಂಶ ಕಡಿಮೆಯಾಗುವುದು; ಲವಣಯುಕ್ತ ಪೋಷಕಾಂಶಗಳ ಕೊರತೆ ಉಂಟಾಗುವುದು .ಆಗ ಎಳನೀರಿಗೆ ನಿಂಬೆ ಹಣ್ಣಿನ ರಸ ಹಿಂಡಿ ಕುಡಿಸುವುದು ಉತ್ತಮ. ಎಳೆಯ ಮಕ್ಕಳಿಗೆ ಈ ಪಾನೀಯ ಕೊಡಬಹುದು.

ಒಂದು ಬಟ್ಟಲು ಎಳನೀರಿಗೆ ಒಂದು ಊಟದ ಚಮಚ ಜೇನುತುಪ್ಪ ಸೇರಿಸಿ ,ಪ್ರತಿದಿನ ಸೇವಿಸುತ್ತಿದ್ದರೆ ಪುಂಸತ್ವ ವೃದ್ಧಿಯಾಗುವುದು, ನರಗಳ ದೌರ್ಬಲ್ಯ ನಿವಾರಣೆಯಾಗುವುದು.

ಕುಡಿದ ಹಾಲನ್ನು ಕಕ್ಕುವ ಮಕ್ಕಳಿಗೆ ಹಾಲಿನೊಂದಿಗೆ ಸ್ವಲ್ಪ ಎಳನೀರು ಬೆರೆಸಿ ಕೊಟ್ಟರೆ ವಾಂತಿಆಗುವುದಿಲ್ಲ ಮತ್ತು ಕುಡಿದ ಹಾಲನ್ನು ಚೆನ್ನಾಗಿ ಜೀರ್ಣಿಸಿ ದೇಹಗತ ವಾಗುವುದು.

ಹಸಿ ತೆಂಗಿನ ( Coconut ) ತುರಿಯನ್ನು ಒಂದು ಬಟ್ಟಲು ಎಳನೀರಿ ನೊಂದಿಗೆ ನುಣ್ಣಗೆ ರುಬ್ಬಿ ಕಲ್ಲುಸಕ್ಕರೆ ಮತ್ತು ಏಲಕ್ಕಿ ಸೇರಿಸಿ ದಿನಕ್ಕೊಂದುವರ್ತಿ ಸೇವಿಸಿದರೆ ಎದೆ ನೋವು ,ಪುಪ್ಪುಸ ನಳಿಕಾದಾಹ ,ಬಿಕ್ಕಳಿಕೆ, ನಿದ್ರಾನಾಶ, ಹೊಟ್ಟೆ ಹುಣ್ಣು ಗುಣವಾಗುವುದು.

Why coconut is not good for health?

ಒಂದು ಬಟ್ಟಲು ಎಳನೀರಿಗೆ ಮೂರು ನಾಲ್ಕು ಚಿಟಿಕೆ ಏಲಕ್ಕಿ ಚೂರ್ಣ ಮತ್ತು ಎರಡು ಊಟದ ಚಮಚ ಜೇನು ತುಪ್ಪ ಸೇರಿಸಿ ಸೇವಿಸಿದರೆ ವಾಂತಿ ನಿಲ್ಲುವುದು. ಉಪಚಾರವನ್ನು ದಿನಕ್ಕೆ ಮೂರಾವರ್ತಿಯಂತೆ 2-3 ದಿನಗಳ ವರೆಗೆ ಮುಂದುವರೆಸುವುದು ಅಗತ್ಯ.

ಸಾಂಕ್ರಾಮಿಕ ರೋಗಗಳಿಂದ ನರಳುವ ರೋಗಿಗಳಿಗೆ ಎಳನೀರನ್ನು ಅಗತ್ಯವಾಗಿ ಕೊಡಬೇಕು; ಔಷಧಿ ಬೇಗ ಮೈ ಹಿಡಿದು ರೋಗಿಯು ಬೇಗ ಗುಣಮುಖನಾಗುತ್ತಾನೆ.

ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಎಳನೀರಿನಲ್ಲಿ ಚೆನ್ನಾಗಿ ಕಿವುಚಿ ಮಕ್ಕಳಿಗೆ ಕುಡಿಸಬಹುದು ಇದು ಹಾಲಿಗೆ ಸಮನಾದ ಆಹಾರ.

ಎಳನೀರಿನ ಒಳಗಿರುವ ದೋಸೆಯಂತಹ ತಿರುಳನ್ನು ಕಳಿತ ಬಾಳೆಹಣ್ಣಿನೊಂದಿಗೆ ಚೆನ್ನಾಗಿ ಮಸೆದು ಹಾಲಿನೊಂದಿಗೆ ಸೇರಿಸಿ ಸೇವಿಸಿದರೆ ಸುಲಭವಾಗಿ ಜೀರ್ಣವಾಗುವುದು. ಈ ಆಹಾರವನ್ನು ಮಕ್ಕಳಿಗೂ, ಜೀರ್ಣಾಂಗಗಳಿಗೆ ಸಂಬಂಧಿಸಿದ ರೋಗಗಳಿಂದ ನರಳುವ ರೋಗಿಗಳಿಗೂ ನಿರ್ಭಯವಾಗಿ ಕೊಡಬಹುದು. ಇದು ಶಕ್ತಿದಾಯಕ ಆಹಾರ.

ವಯೋವೃದ್ಧರಿಗೆ ತೆಂಗಿನಹಾಲನ್ನು ಎಳನೀರಿನೊಂದಿಗೆ ಮಿಶ್ರ ಮಾಡಿಕೊಡುವುದರಿಂದ ಆರೋಗ್ಯ ವೃದ್ಧಿಯಾಗಿರುವುದು; ಇದು ಅತ್ಯಮೂಲ್ಯ ದ್ರವರೂಪ ಆಹಾರ. ಈ ಆಹಾರವನ್ನು ರಿಕೆಟ್ಸ್ ರೋಗಪೀಡಿತ ಮಕ್ಕಳಿಗೂ ಕೊಡಬಹುದು.

ಹಸಿ ಕೊಬ್ಬರಿಯಿಂದ ಹಾಲು ತೆಗೆದು ಗ್ಲಿಸರಿನ್ ನೊಂದಿಗೆ ಮಿಶ್ರ ಮಾಡಿ ಮುಖ ಅಂಗೈ ಅಂಗಾಲುಗಳಿಗೆ ಹಚ್ಚಿದರೆ ಚರ್ಮ ಮೃದುವಾಗುವುದು.

How much coconut a day is healthy?

ಗಸಗಸೆಯನ್ನು ನೀರಿನಲ್ಲಿ ನೆನೆಹಾಕಿ ,ಚೆನ್ನಾಗಿ ಅರೆಯಿರಿ. ತೆಂಗಿನ ತುರಿ ಹಿಂಡಿ ಹಾಲು ತೆಗೆಯಿರಿ. ಗಸಗಸೆಯ ಹಾಲು, ( Coconut ) ತೆಂಗಿನ ಹಾಲು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಜೇನುತುಪ್ಪದೊಂದಿಗೆ ಪ್ರತಿದಿನ ರಾತ್ರಿ ಸೇವಿಸಿ. ಅತಿ ಧೂಮಪಾನ ದಿಂದ ಹುಟ್ಟುವ ಕೆಮ್ಮು, ಎದೆನೋವು, ನಿದ್ರಾನಾಶ, ಆಮಶಂಕೆ, ಅತಿಸಾರ-ಈ ರೋಗಗಳಲ್ಲಿ ಉತ್ತಮ ಗುಣ ಕಂಡುಬರುವುದು.

ಹಸಿ ಕೊಬ್ಬರಿ ಮತ್ತು ಬೆಲ್ಲವನ್ನು ಮಕ್ಕಳಿಗೆ ತಿನ್ನಲಿಕ್ಕೆ ಕೊಡುವುದು ಒಳ್ಳೆಯದು. ಕೊಬ್ಬರಿ ಬೆಲ್ಲ ಚೆನ್ನಾಗಿ ಅಗಿದು ತಿಂದರೆ ವಸಡು ಗಟ್ಟಿಯಾಗುವುದು. ದಂತಕ್ಷಯಕ್ಕೆ ತಡೆ ಯುಂಟಾಗುವುದು.

ಒಣಕೊಬ್ಬರಿ ಮತ್ತು ಕಲ್ಲುಸಕ್ಕರೆ ಮೆಲ್ಲುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುವುದು.

ಕೊಬ್ಬರಿ ಎಣ್ಣೆ ಉಗುರು ಸುತ್ತನ್ನು ಗುಣಪಡಿಸುವುದು. ಶುಭ್ರವಾದ ಬಟ್ಟೆಯ ಚೂರನ್ನು ಸುಣ್ಣದ ತಿಳಿಯಲಿ ನೆನೆಹಾಕಬೇಕು. ನಂತರ, ಈ ಬಟ್ಟೆಯನ್ನು ಕಾದ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಗೋಳಿಸಿದಂತೆ ಮಾಡಬೇಕು. ಚಟಪಟ ಸದ್ದಾಗುವುದು. ಬಳಿಕ, ಬಟ್ಟೆಯನ್ನು ಹೊರತೆಗೆದು ಸಾಕಷ್ಟು ಬಿಸಿಯಾಗಿರುವಾಗಲೇ ಉಗುರುಸುತ್ತು ಆಗಿರುವ ಬೆರಳಿನ ಮೇಲೆ ಬ್ಯಾಂಡೇಜ್ ಸುತ್ತುವಂತೆ ಸುತ್ತಿ ಕಟ್ಟು ಕಟ್ಟಿದರೆ ಗುಣ ಕಂಡುಬರುವುದು.

ಬಲಿತ ತೆಂಗಿನಕಾಯಿ ತುರಿದು, ಸ್ವಲ್ಪ ನೀರಿನೊಂದಿಗೆ ನುಣ್ಣಗೆ ಅರೆಯಿರಿ. ನಂತರ ತೆಂಗಿನ ಹಾಲನ್ನು ಒಂದು ಸ್ಟೀಲ್ ಪಾತ್ರೆಗೆ ಹಿಂಡಿ, ಶೋಧಿಸಿರಿ. ಈ ಹಾಲನ್ನು ಸಣ್ಣ ಉರಿಯ ಮೇಲಿಟ್ಟು ನಿಧಾನವಾಗಿ ಕಾಯಿಸಿ. ಕ್ರಮೇಣ ನೀರಿನ ಅಂಶ ಹಾಲಿನಿಂದ ಬೇರ್ಪಟ್ಟು, ಶುದ್ಧವಾದ ಕೊಬ್ಬರಿ ಎಣ್ಣೆ ಪಾತ್ರೆಯಲ್ಲಿ ಉಳಿಯುವುದು. ಈ ಎಣ್ಣೆಯನ್ನು ಒಂದು ಸೀಸೆಯಲ್ಲಿ ತುಂಬಿಡಿ. ಬಾಯಿಹುಣ್ಣು ಆದಾಗ ಈ ಎಣ್ಣೆಯನ್ನು ಪದೇಪದೇ ಹಚ್ಚುತ್ತಿದ್ದರೆ ಬೇಗ ಗುಣ ಕಂಡುಬರುವುದು.

ಪರಿಶುದ್ಧವಾದ ಕೊಬ್ಬರಿ ಎಣ್ಣೆಯಿಂದ ತಯಾರಿಸಿದ ಅಡುಗೆ ಹೆಚ್ಚು ಆರೋಗ್ಯಕರ. ಅಡುಗೆಗೆ ಇತರ ಎಣ್ಣೆ ಗಳಿಗಿಂತ ಕೊಬ್ಬರಿ ಎಣ್ಣೆಯೇ ಉತ್ತಮ.

Can you eat coconut everyday?

ಒಂದು ಎಸಳು ಬೆಳ್ಳುಳ್ಳಿ ಮತ್ತು ಒಂದು ಲವಂಗವನ್ನು ಊಟದ ಚಮಚದಷ್ಟು ಅಪ್ಪಟ ಕೊಬ್ಬರಿ ಎಣ್ಣೆಯಲ್ಲಿ ಕರೆಯಿರಿ. ಶೀತದಿಂದ ಹುಟ್ಟಿದ ಕಿವಿ ಫೋಟು ನಿಲ್ಲಿಸುವ ಸಲುವಾಗಿ ಈ ಎಣ್ಣೆಯನ್ನು ನಾಲ್ಕೈದು ತೊಟ್ಟು ಕಿವಿಗೆ ಬಿಡಿ. ಕಿವಿ ನೋವು ನಿಲ್ಲುವುದು.

ಕೊಬ್ಬರಿ ಎಣ್ಣೆಗೆ ಕೆಲವು ತೊಟ್ಟು ನಿಂಬೆ ರಸ ಹಿಂಡಿ. ನಂತರ ( Coconut ) ಎಣ್ಣೆಯನ್ನು ಅಷ್ಟೇ ಪ್ರಮಾಣ ಸುಣ್ಣದ ತಿಳಿ ಯೊಂದಿಗೆ ಮಿಶ್ರಮಾಡಿ. ಈ ಮಿಶ್ರಣವನ್ನು ಅಂಗಾಂಗಗಳಿಗೆ ಹಚ್ಚುವುದರಿಂದ ಒರಟಾದ ಚರ್ಮ ನಯವಾಗುವುದು, ಮೃದುವಾಗುವುದು ಮತ್ತು ಕಾಂತಿಯುತವಾಗುವುದು, ಚರ್ಮ ಸುಕ್ಕುಗಟ್ಟುವುದಿಲ್ಲ. ಈ ಮಿಶ್ರಣವನ್ನು ಕೂದಲಿಗೂ ಹಚ್ಚಬಹುದು. ಇದರಿಂದ ಕೂದಲು ಉದುರುವಿಕೆ ನಿಲ್ಲುವುದು, ಕೂದಲಿನ ಕಾಂತಿ ಹೆಚ್ಚುವುದು ಮತ್ತು ಕೂದಲು ಉದ್ದವಾಗಿ ಬೆಳೆಯುವುದು.

Leave a Reply