ನಮ್ಮದು ನಿಸ್ವಾರ್ಥ ಸೇವೆ...ನಮ್ಮ ಭಾರತ ದೇಶದ ಪುರಾತನ ಪದ್ಧತಿಯಾದ ಆಯುರ್ವೇದವನ್ನು ಎಲ್ಲರಿಗೂ ತಿಳಿಯಲಿ ಹಾಗೂ ಅದರ ಉಪಯೋಗ ಪಡೆಯಲೇಂದು ನಾವು ಸಮಾಜಕ್ಕೆ ಮಾಡುವ ಸಣ್ಣ ಅಳಿಲು ಸೇವೆ

Follow Us

10 Amazing Health Benefits of Ginger

[ Ginger ] ಶುಂಠಿಯೂ ಅತ್ಯುತ್ತಮ ಪಚನಕಾರಿ;ಈ ಕಾರ್ಯದಲ್ಲಿ ಒಣಶುಂಠಿ ಗಿಂತ ಹಸಿಶುಂಠಿ ಹೆಚ್ಚು ಪರಿಣಾಮಕಾರಿ. ( Ginger ) ಹಸಿಶುಂಠಿಯನ್ನು ಚಟ್ನಿ, ಉಪ್ಪಿನಕಾಯಿ, ಕೋಸುಂಬರಿ, ಮಜ್ಜಿಗೆಹುಳಿ ಇತ್ಯಾದಿ ತಿನಿಸುಗಳ ಮೂಲಕ ಸೇವಿಸುವುದು ವೇಡಿಕೆಯಾಗಿದೆ. ಶುಂಠಿ ಸೇವಿಸುವುದರಿಂದ ಜಠರದ ಕ್ರಿಯಾಶಕ್ತಿ ಹೆಚ್ಚುವುದು. ಇದರ ಫಲವಾಗಿ ಹೆಚ್ಚು ಹೆಚ್ಚು ಜಠರ ರಸ ಉತ್ಪತ್ತಿಯಾಗುವುದು; ಆದುದರಿಂದ ಜೀರ್ಣಶಕ್ತಿ ಹೆಚ್ಚುವುದು.

ಪ್ರತಿ ಊಟದ ನಂತರ ಒಂದು ಚೂರು ಶುಂಠಿ ಅಗಿದು ಚಪ್ಪರಿಸುವ ಅಭ್ಯಾಸವಿಟ್ಟುಕೊಂಡರೆ ಅಜೀರ್ಣ, ಹೊಟ್ಟೆ ಹುಣ್ಣು, ಹೊಟ್ಟೆ ಉಬ್ಬರ ಇತ್ಯಾದಿ ಜೀರ್ಣಾಂಗ ಸಂಬಂಧ ರೋಗಗಳ ಭಯವಿರುವುದಿಲ್ಲ. ಶುಂಠಿ ಸೇವಿಸುವುದರಿಂದ ಪಿತ್ತ ಶಮನವಾಗುವುದು.

ಶುಂಠಿಯನ್ನು ಸೇವಿಸುವುದರಿಂದ ಪರಾವಲಂಬಿ ಜೀವಿಗಳು ಜಠರದಲ್ಲಾಗಲೀ ಕರುಳಿನಲ್ಲಾಗಲೀ ಆಶ್ರಯ ಪಡೆಯಲು ಅವಕಾಶವಾಗುವುದಿಲ್ಲ.

ಅರುಚಿಯುಂಟಾದಾಗ ಒಂದು ಚೂರು ಹಸಿ ಶುಂಠಿ, ನಾಲ್ಕೈದು ಜೀರಿಗೆ ಕಾಳು, ಸ್ವಲ್ಪ ಕಲ್ಲುಸಕ್ಕರೆ ಚೆನ್ನಾಗಿ ಅಗಿದು ಚಪ್ಪರಿಸುವುದರಿಂದ ನಾಲಿಗೆಯ ರುಚಿ ಗ್ರಹಣಶಕ್ತಿ ಉತ್ತಮಗೊಂಡು ಊಟ ಬೇಕೆನಿಸುವುದು.

ಸಂಧಿವಾತ, ಮೂಲವ್ಯಾಧಿ, ಕಾಮಾಲೆ, ಹೊಟ್ಟೆ ತೊಳಸುವಿಕೆ, ಹೊಟ್ಟೆ ಉಬ್ಬರ, ವಾಕರಿಕೆ, ಅಜೀರ್ಣ, ಮಲಬದ್ಧತೆ, ಗಂಟಲು ಕೆರೆತ, ಗಂಟಲು ಒಡೆದಿರುವುದು, ಶ್ವಾಸ ನಳಿಕಾ ದಾಹ- ಈ ರೋಗಲಕ್ಷಣಗಳುಳ್ಳವರು ಒಂದು ಟೀ ಚಮಚ Ginger ರಸ, ಎರಡು ಟೀ ಚಮಚ ನಿಂಬೆ ರಸ, ಎರಡು ಟೀ ಚಮಚ ಪುದಿನ ಸೊಪ್ಪಿನ ರಸ ಮತ್ತು ಆರು ಟೀ ಚಮಚ ಜೇನುತುಪ್ಪ ಮಿಶ್ರಮಾಡಿ ದಿನಕ್ಕೆ ಮೂರಾವರ್ತಿ ಸೇವಿಸುವುದರಿಂದ ಗುಣ ಕಂಡುಬರುವುದು.

ತಲೆನೋವು ಇದ್ದಲ್ಲಿ ( Ginger ) ಹಸಿಶುಂಠಿಯನ್ನು ನೀರಿನಲ್ಲಿ ತೇದು,ಆ ಗಂಧವನ್ನು ಹಣೆಗೆ ಹಚ್ಚಿ ಬೆಚ್ಚಗೆ ಹೊದ್ದು ಮಲಗಬೇಕು; ಬೆವರು ಸುರಿದು ತಲೆನೋವು ನಿವಾರಣೆಯಾಗುವುದು.

ತಣ್ಣೀರಿನ ಸ್ನಾನ, ಮಳೆಯಲ್ಲಿ ತೊಯ್ದಿರುವುದು, ಶೀತ ಮಾರುತ ಈ ಕಾರಣಗಳಿಂದ ದೇಹಾಲಸ್ಯವುಂಟಾಗಿದ್ದರೆ ಹಸಿ ಶುಂಠಿಯ ಕಷಾಯ ತಯಾರಿಸಿ ಸಕ್ಕರೆ ಬೆರೆಸಿ ದಿನಕ್ಕೆ ಮೂರಾವರ್ತಿ ಸೇವಿಸಿದರೆ ಜಡ್ಡ ನಿವಾರಣೆಯಾಗುವುದು. ನೆಗಡಿಯ ನಿವಾರಣೆಗೆ ಈ ಕಷಾಯ ಸಿದ್ಧೌಷಧಿ.

ಒಂದು ಬಟ್ಟಲು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿ ಶುಂಠಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ ನಿವಾರಣೆಯಾಗುವುದು. ಇದು ಕ್ಷಯ, ಕೆಮ್ಮು, ದಮ್ಮು, ನಾಯಿಕೆಮ್ಮು ಈ ರೋಗಗಳಲ್ಲಿ ಕಫ ಕಟ್ಟಿಕೊಳ್ಳುವುದರಿಂ ದಾಗುವ ಬಾಧೆಯನ್ನು ನಿವಾರಿಸಲು ಸಹಕಾರಿ.

ಗಂಟಲು ಒಡೆದು ಮಾತನಾಡಲು ತೊಂದರೆವುಂಟಾದಾಗ ಒಂದು ಚೂರು Ginger, ಒಂದು ಲವಂಗ ಮತ್ತು ಒಂದು ಹರಳು ಉಪ್ಪು ಅಗಿದು ಚಪ್ಪರಿಸು ವುದರಿಂದ ಗುಣವುಂಟು.

ಮಕ್ಕಳಿಗೆ ಏಳೆಂಟು ತೊಟ್ಟು ತಾಜಾ ಶುಂಠಿ ರಸವನ್ನು ಜೇನುತುಪ್ಪದಲ್ಲಾಗಲೀ ಹಾಲಿನಲ್ಲಾಗಲೀ ಬೆರೆಸಿ ಕೊಡುವುದರಿಂದ ಜಠರ ಮತ್ತು ಕರುಳಿಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುವುವು.

ಬೆಂದ ಹಸಿರು ಸೊಪ್ಪು ಮತ್ತು ಕಾಯಿಪಲ್ಲೆ ಜೀರ್ಣಿಸುವಾಗ ಹೆಚ್ಚು ಅನಿಲೋತ್ಪತ್ತಿಯಾಗುವುದು; ಈ ಅನಿಲವು ಕರುಳಿನಲ್ಲಿ ಸಂಗ್ರಹವಾಗಿ ಅನಾರೋಗ್ಯಕ್ಕೆ ಎಡೆಯುಂಟಾಗುವುದು; ಹಸಿಶುಂಠಿಯನ್ನು ಮೇಲೆ ತಿಳಿಸಿದ ಆಹಾರದೊಂದಿಗೆ ಸೇವಿಸುವುದರಿಂದ ಈ ದೋಷ ನಿವಾರಣೆಯಾಗುವುದು.

ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿಮಾಡಿ. ಈ ಚೂರ್ಣಕ್ಕೆ ಉಪ್ಪಿನ ಪುಡಿ ಸೇರಿಸಿ ಹಲ್ಲು ತಿಕ್ಕುವುದರಿಂದ ಹಲ್ಲು ನೋವು ಶಾಂತವಾಗುವುದು.

ಒಂದು ಅಂಗುಲ ಉದ್ದದ ಒಣ ಶುಂಠಿ ಮತ್ತು ಒಂದು ಟೀ ಚಮಚ ಜೀರಿಗೆ ತೆಗೆದುಕೊಂಡು ಜಜ್ಜಿ ಪುಡಿಮಾಡಿ. ನಾಲ್ಕು ಬಟ್ಟಲು ಕುದಿಯುವ ನೀರಿಗೆ ಈ ಪುಡಿಯನ್ನು ಹಾಕಿ; ಐದು ನಿಮಿಷಗಳ ಕಾಲ ಕುದಿಸಿ; ನಂತರ ಶೋಧಿಸಿ; ಉಗುರು ಬೆಚ್ಚಗಿರುವಾಗ ಈ ಕಷಾಯವನ್ನು ನೀರಿಗೆ ಬದಲು ಸೇವಿಸಿ; ಅಜೀರ್ಣ ನಿವಾರಣೆಯಾಗುವುದು.

ಸುಮಾರು ನೂರು ಗ್ರಾಂ ಕೊತ್ತುಂಬರಿ ಬೀಜ ಮತ್ತು ಇಪ್ಪತ್ತೈದು ಗ್ರಾಂ ಒಣಶುಂಠಿಯನ್ನು ಕೆಂಪಗೆ ಹುರಿಯಿರಿ. ಇದಿಷ್ಟನ್ನೂ ಚೆನ್ನಾಗಿ ಕುಟ್ಟಿ ಜರಡಿ ಹಿಡಿಯಿರಿ; ಚೂರ್ಣವನ್ನು ಒಂದು ಗಾಜಿನ ಸೀಸೆಯಲ್ಲಿ ತುಂಬಿಡಿ. ಅಜೀರ್ಣವುಂಟಾದಾಗ ಒಂದು ಬಟ್ಟಲು ಕುದಿಯುವ ನೀರಿಗೆ ಎರಡು ಟೀ ಚಮಚ ಚೂರ್ಣ ಮತ್ತು ಒಂದು ಟೀ ಚಮಚ ಬೆಲ್ಲದ ಪುಡಿ ಹಾಕಿ ಎರಡು ನಿಮಿಷಗಳ ಕಾಲ ಕುದಿಸಿ; ನಂತರ ಕಷಾಯವನ್ನು ಶೋಧಿಸಿ, ಹಾಲು ಬೆರೆಸಿ ಕುಡಿಯಿರಿ,ಅಜೀರ್ಣ ನಿವಾರಣೆಯಾಗುವುದು.

ಒಂದು ಅಂಗುಲ ಉದ್ದದ ಹಸಿ ಶುಂಠಿಯನ್ನು ಸ್ವಲ್ಪ ನೀರಿನಲ್ಲಿ ಚೆನ್ನಾಗಿ ಅರೆಯಿರಿ; ಇದನ್ನು ಒಂದು ಬಟ್ಟಲು ನೀರಿನಲ್ಲಿ ಕದಡಿ ಶೋಧಿಸಿರಿ. ನಂತರ ರುಚಿಗೆ ತಕ್ಕಷ್ಟು ಜೇನುತುಪ್ಪ ಮತ್ತು ನಿಂಬೆ ರಸ ಬೆರೆಸಿ ಸೇವಿಸಿ. ಅಜೀರ್ಣ ನಿವಾರಣೆಯಾಗುವುದು.

ಊಟಕ್ಕೆ ಮುಂಚೆ ಅವರೆಕಾಳಿನಷ್ಟು ಹಸಿ ಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿನ್ನುವುದರಿಂದ ಅಜೀರ್ಣ ತಲೆದೋರುವ ಸಾಧ್ಯತೆ ಇರುವುದಿಲ್ಲ.

ಒಂದು ಟೀ ಚಮಚ ಒಣಶುಂಠಿಯ ಚೂರ್ಣವನ್ನು ಆಗ ತಾನೇ ಹಿಂಡಿದ ಒಂದು ಬಟ್ಟಲು ಹಸುವಿನ ಹಾಲಿನಲ್ಲಿ ಕದಡಿ ಸೇವಿಸಿ. ಪ್ರತಿದಿನ ಬೆಳಿಗ್ಗೆ ಒಂದು ವಾರ ಕಾಲ ಈ ಕ್ರಮ ಅನುಸರಿಸುವುದರಿಂದ ಅರಿಶಿನ ಕಾಮಲೆ ಗುಣವಾಗುವುದು.

Leave a Reply